ಧರ್ಮಸ್ಥಳ ಹೆಸರಿಗೆ ಧಕ್ಕೆ ತರುವವರಿಗೆ ಕಠಿಣ ಶಿಕ್ಷೆ ವಿಧಿಸಲು ಭಕ್ತರು ಆಕ್ರೋಶ
ಧರ್ಮಸ್ಥಳದ ಹೆಸರು ಕೆಡಿಸುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಭಕ್ತರು ಒತ್ತಾಯಿಸುತ್ತಿದ್ದಾರೆ
ಮುಂಡಗೋಡ 19 : ಪಟ್ಟಣದಲ್ಲಿ ಧರ್ಮಸ್ಥಳದ ಮಂಜುನಾಥ ದೇವಸ್ಥಾನದ ಭಕ್ತರು ಸೋಮವಾರ ಪ್ರತಿಭಟನೆ ನಡೆಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಪೂಜ್ಯ ಧರ್ಮಾಧಿಕಾರಿಗಳ ಕುಟುಂಬಕ್ಕೆ ಕಳಂಕ ತರಲು ಒಳಸಂಚು ನಡೆಸುತ್ತಿರುವರ ವಿರುದ್ಧ ಸೂಕ್ತ ತನಿಖೆ ನಡೆಸಿ ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕು ಎಂದು ನೂರಾರು ಸಂಖ್ಯೆಯಲ್ಲಿ ಭಕ್ತರು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಇಲ್ಲಿನ ಮಾರಿಕಾಂಬಾ ದೇವಸ್ಥಾನದಿಂದ ಶಿವಾಜಿ ಸರ್ಕಲ್ ವೃತ್ತದಲ್ಲಿ ಪ್ರತಿಭಟನಕಾರರು ಮಾನವ ಸರಪಳಿ ನಿರ್ಮಿಸಿ, ಧಾರ್ಮಿಕ ಕ್ಷೇತ್ರದ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಪೂಜ್ಯ ಧರ್ಮಾಧಿಕಾರಿಗಳ ಹೆಸರಿಗೆ ಧಕ್ಕೆ ತರುವವರಿಗೆ ಕಠಿಣ ಶಿಕ್ಷೆ ವಿಧಿಸಲು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ಮಂಜುನಾಥ ಪಾಟೀಲ, ಫಣಿರಾಜ ಹದಳಗಿ, ಸುರೇಶ್ ಕಲ್ಲೋಳ್ಳಿ ಭರತ ಹದಳಗಿ, ನಾರಾಯಣ ಉಕ್ಕುಂದ, ಮಾರುತಿ ಓಂಕಾರ, ಮಲ್ಲಿಕಾರ್ಜುನ ಗೌಳಿ, ಬಸವರಾಜ ತಣಕೆದಾರ, ಶ್ರೀಧರ ಉಪ್ಪಾರ, ಮಂಜುನಾಥ ಹಿರೇಮಠ,ಗಣೇಶ ಶಿರಾಲಿ, ಮಂಜುಳಾ ಹೆಗಡೆ.ರವಿ ಹಾವೇರಿ,ಶಂಕರ ಲಮಾಣಿ, ಪ್ರಕಾಶ ಬಡಿಗೇರ, ಎಚ್. ಮಂಜುನಾಥ, ಸುನೀತಾ ನಾಯಕ್, ಮಂಜುಳಾ ಶೇಟ್, ದ್ಯಾಮಕ್ಕಾ ಲಚ್ಚಿ, ಜಮೇಲಾ, ಮಂಜುನಾಥ ಶೇಟ್, ಶ್ರೀಧರ ಛಬ್ಬಿ ಹಾಗೂ ಉಪಸ್ಥಿತಿದ್ದರು.
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ
ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ಬಿಡುಗಡೆ; ಭರ್ಜರಿ ಆ್ಯಕ್ಷನ್ ಮತ್ತು ತೀವ್ರ ಕಥಾಹಂದರದ ಸುಳಿವು 